ಬೆಂಗಳೂರು ವಿಭಾಗದಲ್ಲಿ ಶಿರಸ್ತೇದಾರ್‌/ಉಪತಹಶೀಲ್ದಾರ್‌ಗಳ ವರ್ಗಾವಣೆ ಆದೇಶ

ಬೆಂಗಳೂರು, ಮೇ 27: 2026-27ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಬೆಂಗಳೂರು ವಿಭಾಗದ ಶಿರಸ್ತೇದಾರ್‌ ಹಾಗೂ ಉಪತಹಶೀಲ್ದಾರ್‌ ವೃಂದದ ನೌಕರರ ವರ್ಗಾವಣೆ ಆದೇಶವನ್ನು ಪ್ರಾದೇಶಿಕ ಆಯುಕ್ತರು ಹಾಗೂ ನೋಡಲ್ ಅಧಿಕಾರಿಗಳು ಹೊರಡಿಸಿದ್ದಾರೆ.

ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಮತ್ತು ಮಾನ್ಯ ಕಂದಾಯ ಸಚಿವರ ನಿರ್ದೇಶನದಂತೆ ಈ ವರ್ಗಾವಣೆಗಳನ್ನು ಜಾರಿಗೆ ತರಲಾಗಿದೆ ಎಂದು ಅಧಿಕೃತ ಜ್ಞಾಪನದಲ್ಲಿ ತಿಳಿಸಲಾಗಿದೆ. ಸರ್ಕಾರದ ಆದೇಶದ ಪ್ರಕಾರ, ಇಲಾಖೆಯ ಒಟ್ಟು ನೌಕರರ ಬಲದ ಶೇಕಡಾ 6ರ ಒಳಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಅವಕಾಶ ನೀಡಲಾಗಿದೆ.

ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವು ಅರ್ಹ ನೌಕರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹೊಸ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ. ಸಚಿವರು, ಶಾಸಕರು ಹಾಗೂ ನೌಕರರಿಂದ ಬಂದ ಮನವಿಗಳ ಪರಿಶೀಲನೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳಲ್ಲಿ ಪಾವನ ಎಂ.ಎನ್. ಅವರನ್ನು ಆಡಿಟ್ ಶಾಖೆಯಿಂದ ಉತ್ತರಹಳ್ಳಿ ಹೋಬಳಿ ನಾಡಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಹಾಗೆಯೇ ಎಂ.ಟಿ. ಕಂಪೇಗೌಡ ಅವರನ್ನು ತಾವರಕೆರೆ ಹೋಬಳಿ ನಾಡಕಚೇರಿಯಿಂದ ಕೆಂಗೇರಿ ಹೋಬಳಿ ನಾಡಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಈ ಆದೇಶವನ್ನು ಪ್ರಾದೇಶಿಕ ಆಯುಕ್ತರ ಕಚೇರಿ, ಬೆಂಗಳೂರು ವಿಭಾಗದಿಂದ ಪ್ರಕಟಿಸಲಾಗಿದೆ.

ವರ್ಗಾವಣೆ ಪಡೆದವರ ಪಟ್ಟಿಯನ್ನು ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ

 

Leave a Reply

Your email address will not be published. Required fields are marked *